Sunday, March 22, 2026
Homeಕ್ರೈಂ ಸುದ್ದಿಗಳುಗೋಕಾಕ ನಗರದಲ್ಲಿ ದರೋಡೆ ಮಾಡಿದ 07 ಜನರ ಬಂಧನ…!

ಗೋಕಾಕ ನಗರದಲ್ಲಿ ದರೋಡೆ ಮಾಡಿದ 07 ಜನರ ಬಂಧನ…!

ಗೋಕಾಕ: ದಿನಾಂಕ: 17/3/2026 ರಂದು 21-45 ಗಂಟೆಗೆ ರಾಮಚಂದ್ರರಾವ ಉರ್ಫ ಸಚೀನ ತಂದೆ ಹಣಮಂತರಾವ ಘೋರ್ಪಡೆ ಸಾ: ಚಿಗಡೊಳ್ಳಿ ತಾ: ಗೋಕಾಕ ಸದ್ಯಕ್ಕೆ ವಡಗಾಂವ ಯಳ್ಳೂರ ರೋಡ್ ಬೆಳಗಾವಿ ರವರು ತಮ್ಮ ಫಿರ್ಯಾದವನ್ನು ನೀಡಿದ್ದು
ದಿನಾಂಕ: 15/3/2026 ರಂದು ಮಧ್ಯರಾತ್ರಿ 12.30 ಗಂಟೆಯ ಸುಮಾರಿಗೆ ಗೋಕಾಕ ಶಹರದ ಖತೀಬ ಮಸೀದ ಹತ್ತಿರ 06 ಜನರು ಕೂಡಿಕೊಂಡು ಫಿರ್ಯಾದಿಗೆ ಅಡ್ಡಗಟ್ಟಿ ನಿಲ್ಲಿಸಿ ಅವನಿಗೆ ಕೈಯಿಂದಾ ಬಡೆದು ಅವನ ಕೊರಳಲ್ಲಿಂದಾ 16 ಗ್ರಾಂ ತೂಕಿನ ಬಂಗಾರದ ಚೈನ್ ಮತ್ತು ಲಾಕೇಟನ್ನು ಕಿತ್ತುಕೊಂಡು ದರೋಡೆ ಮಾಡಿರುತ್ತಾರೆ ಅಂತಾ ವಗೈರೆ ಹೇಳಿಕೆ ನೀಡಿದ್ದಾರೆ.
ಗೋಕಾಕ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 92/2026 ಕಲಂ: 310(2), 118(1), 126(2) ಸಹ ಕಲಂ: 190 ಬಿಎನ್‌ಎಸ್-23 ನೇದ್ದಕ್ಕೆ ದಾಖಲಾಗಿರುತ್ತದೆ.

ಶ್ರೀ ರಾಮರಾಜನ್. ಕೆ ಐ.ಪಿ.ಎಸ್.ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ ರವರು ಶ್ರೀ ಸುರೇಶ ಬಾಬು ಆರ್.ಬಿ ಸಿಪಿಐ ಗೋಕಾಕ ಮತ್ತು ಶ್ರೀ ಕಿರಣ ಮೋಹಿತೆ ಪಿಎಸ್‌ಐ ಗೋಕಾಕ ಶಹರ ಠಾಣೆ ರವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದು, ಸದರಿ ತನಿಖಾ ತಂಡವು ಶ್ರೀ ರಾಮಗೊಂಡ ಬಸರಗಿ ಹೆಚ್ಚುವರಿ ಎಸ್.ಪಿ-01 ಬೆಳಗಾವಿ ಜಿಲ್ಲೆ ಮತ್ತು ಶ್ರೀ ರವಿ ಡಿ ನಾಯ್ಡಡಿ. ಎಸ್. ಪಿ. ಗೋಕಾಕ ಉಪವಿಭಾಗ ಇವರ ಮಾರ್ಗದರ್ಶನದಲ್ಲಿ ದಿನಾಂಕ: 20/3/2026 ರಂದು ಆರೋಪಿತಾರ 1) ಆಕಾಶ ಮಹಾದೇವ ತಳವಾರ. 2) ರಾಮಸಿದ್ದ ಮಾರುತಿ ತೋಳಿ, 3) ರಿತೇಶ ಶಿವಾಜಿ ಫಕೀರೆ. 4) ನಾಗರಾಜ ರಾಮಪ್ಪಾ ತೋಳಿ, 5) ಗೋಪಾಲ ಕಲ್ಲಪ್ಪಾ ತೋಳಿ ಸಾ: ಎಲ್ಲರೂ ಗೋಕಾಕ ಹಾಗೂ ಅಪ್ರಾಪ್ತ ಬಾಲಕ ಹಾಗೂ ಆರೋಪಿತರಿಗೆ ಬಚ್ಚಿಟ್ಟುಕೊಳ್ಳಲು ಆಶ್ರಯ ನೀಡಿದ 6) ಸಿದ್ದಪ್ಪಾ ಮಾಯಪ್ಪಾ ಕುರುಬನ್ನವರ ಸಾ: ಬಸಳಿಗುಂದಿ ತಾ: ಗೋಕಾಕ ಇವನಿಗೆ ಸೇರಿ ಒಟ್ಟು 07 ಆರೋಪಿತರನ್ನು ದಸ್ತಗಿರಿ ಮಾಡಿದ್ದು ಆರೋಪಿತರು ದರೋಡೆ ಮಾಡಿದ ಬಂಗಾರದ ಆಭರಣವನ್ನು ದಾರಿ ಹೋಕರಿಗೆ ಮಾರಾಟ ಮಾಡಿದ್ದು, ಅವರಿಂದಾ 12,000/-ರೂ ನಗದು ಹಣವನ್ನು ಜಪ್ತ ಮಾಡಿ ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಮಾನ್ಯ ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ.

ಸದರಿ ಪ್ರಕರಣದಲ್ಲಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಶ್ರೀ ಸುರೇಶಬಾಬು ಆರ್ ಬಿ ಸಿಪಿಐ ಗೋಕಾಕ. ಗೋಕಾಕ ಶಹರ ಠಾಣೆಯ ಪಿ ಎಸ್ ಐ. ಶ್ರೀ ಕಿರಣ ಮೋಹಿತೆ ಹಾಗೂ ಸಿಬ್ಬಂದಿ ಜನರಾದ ಆರ್.ಬಿ.ಹಡಪದ ಎ.ಎಸ್.ಐ., ಕೆ.ಎನ್.ಇಳಿಗೇರ, ಜೆ.ಎಚ್.ಗುಡ್ಲಿ, ಪಿ.ಎಮ್.ಗಸ್ತಿ, ಎಮ್.ಆರ್ ಅಂಬಿ, ಎಸ್.ಎಮ್ ಮಂಗಿ, ಮಂಜುನಾಥ ಹುಚ್ಚಗೌಡರ, ಐ.ವಿ.ಘಂಟಿ, ಮಂಜುನಾಥ ನಾಯಿಕ ಮತ್ತು ಸಚೀನ ಪಾಟೀಲ ಟೆಕ್ನಿಕಲ್ ಸೆಲ್ ಬೆಳಗಾವಿ ಇವರ ಕಾರ್ಯವನ್ನು ಮಾನ್ಯ ಎಸ್ ಪಿ ಸಾಹೇಬರು ಬೆಳಗಾವಿ ಜಿಲ್ಲೆರವರು ಶ್ಲಾಘಿಸಿರುತ್ತಾರೆ.

ಸಂಪಾದಕರು: ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)

ಹೆಚ್ಚಿನ ಸುದ್ದಿ