Monday, March 23, 2026
Homeಜಿಲ್ಲಾ ಸುದ್ದಿಗಳುಕ್ರೀಯಾ ಯೋಜನೆಯಲ್ಲಿ ಚಾಲ್ತಿಯಲ್ಲಿ ಇರುವ ಹಾಗೂ ಮುಕ್ತಾಯ ಅಂತದ ಕಾಮಗಾರಿಗಳು :: ಕುಲಂ‌ ಕುಲಂ ಲೂಟಿಗೆ...

ಕ್ರೀಯಾ ಯೋಜನೆಯಲ್ಲಿ ಚಾಲ್ತಿಯಲ್ಲಿ ಇರುವ ಹಾಗೂ ಮುಕ್ತಾಯ ಅಂತದ ಕಾಮಗಾರಿಗಳು :: ಕುಲಂ‌ ಕುಲಂ ಲೂಟಿಗೆ ಸಿದ್ದವಾದ ರಾಯಚೂರು ಮಹಾ ನಗರ ಪಾಲಿಕೆ.?

ರಾಯಚೂರು ಮಾ 21:-ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಎರಡನೇ ಹಂತದ 185 ಕೋಟಿ ಅನುದಾನದಲ್ಲಿ ಒಟ್ಟು 21 ಕಾಮಗಾರಿಗಳಿಗೆ ಸಿದ್ಧ ಪಡಿಸಿದ ಕ್ರಿಯಾ ಯೋಜನೆ ಭಾರಿ ಅನುಮಾನಕ್ಕೆ ಮತ್ತು ಅನೇಕ ನ್ಯೂನ್ಯತೆಗಳಿಂದ ಕೂಡಿದೆ.

ಮಹಾನಗರ ಪಾಲಿಕೆ ಮೇಲ್ದರ್ಜೆಗೆ ಏರಿದ ನಂತರ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಅಡಿ ಪಾಲಿಕೆಗೆ ಒಟ್ಟು ಎರಡು ನೂರು ಕೋಟಿ ಹಂಚಿಕೆ ಅನುದಾನ ಪೈಕಿ, 185 ಕೋಟಿ ಮೊತ್ತಕ್ಕೆ ಎಸ್.ಸಿ.ಪಿ ಘಟಕ ಅಡಿ ಆರು ಕಾಮಗಾರಿಗಳಿಗೆ 31. 73 ಕೋಟಿ ಹಾಗೂ ಟಿಎಸ್ಪಿ ಘಟಕ ಅಡಿ 2 ಕಾಮಗಾರಿಗಳಿಗೆ 12.86 ಕೋಟಿ ಮತ್ತು ಸಾಮಾನ್ಯ ಘಟಕ ಅಡಿ ಒಟ್ಟು 13 ಕಾಮಗಾರಿಗಳಿಗೆ 140.41 ಕೋಟಿ ಮೊತ್ತದ ಕ್ರಿಯೆ ಯೋಜನೆಗೆ ಸಮಿತಿಯು ಅನುಮೋದನೆ ನೀಡಿದೆ.

ಈ ಕ್ರಿಯಾಯೋಜನೆಯಲ್ಲಿ ಈಗಾಗಲೇ ಪೂರ್ಣಗೊಂಡ ಕಾಮಗಾರಿ ಅಥವಾ ಪೂರ್ಣಗೊಳ್ಳುವ ಹಂತದಲ್ಲಿರುವ ಕಾಮಗಾರಿಗಳು ಸೇರಿರುವುದು ಗಮನಾರ್ಹವಾಗಿದೆ.

ನಗರದ ಗೊಂಬೆ ಕಂಪನಿಯಿಂದ ಜಮಲಮ್ಮ ದೇವಿ ದೇವಸ್ಥಾನದ ಮೂಲಕ ಗದ್ವಾಲ್ ರಸ್ತೆಯಲ್ಲಿ ಕೆಲ ಭಾಗದಲ್ಲಿ ಕಾಮಗಾರಿ ಇತ್ತೀಚೆಗಷ್ಟೇ ಕೈಗೊಳ್ಳಲಾಗಿದೆ. ಇದೇ ರಸ್ತೆಯನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸುವುದು ಕ್ರಿಯಾ ಯೋಜನೆ ಸಿದ್ಧಪಡಿಸಿ, ಯುಟಿಲಿಟಿ ಡಕ್ಟ್ ಲೈನ್, ಪಾದಾಚಾರಿ ಮಾರ್ಗ ಮತ್ತು ಸಿಸಿ ಚರಂಡಿ ನಿರ್ಮಾಣಕ್ಕೆ 10 ಕೋಟಿ ಮೀಸಲಿಸಲಾಗಿದೆ.

ಅಲ್ಲದೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಸಂಖ್ಯೆ 19, 20, 24, 33,34,31,02,12, 04 2 35 ರ ಪರಿಶಿಷ್ಟ ಜಾತಿ ಸಮುದಾಯ ಕಾಲೋನಿಯಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಪಾದಾ ಚಾರಿಮಾರ್ಗ ಯುಟಿಲಿಟಿ ಡಕ್ಟ ಲೈನ್ ಹಾಗೂ ಸಿ.ಸಿ ಚರಂಡಿ ನಿರ್ಮಿಸಲು 15.93 ಕೋಟಿ ಕ್ರಿಯಾ ಯೋಜನೆ ಸಿದ್ದ ಪಡಿಸಲಾಗಿದೆ.

ಆದರೆ, ಈ ವಾರ್ಡ್ ಈಗಾಗಲೇ ಇತರ ಯೋಜನೆ ಅಡಿ ರಸ್ತೆ ಕಾಮಗಾರಿ ಕೈಗೊಂಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. 15. 93 ಕೋಟಿ ಕ್ರಿಯಾಯೋಜನೆ ಸಿದ್ಧಪಡಿಸುವಾಗ ಈ ಕಾಮಗಾರಿಗಳ ಬಗ್ಗೆ ಮಾಹಿತಿ ಇರಲಿಲ್ಲವೇ ಅಥವಾ ಡಬ್ಲಿಂಗ್ ಉದ್ದೇಶದ ಪ್ರಭಾವಕ್ಕೆ ಗುರಿಯಾಗಿ ಕ್ರಿಯಾ ಯೋಜನೆ ಮಾಡಲಾಗಿದೆಯೇ?

ಪರಿಶಿಷ್ಟ ಪಂಗಡಗಳ ಘಟಕ ಕ್ರಿಯ ಯೋಜನೆ ಅಡಿ ಒಟ್ಟು ಎರಡು ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಲಾಗಿದೆ. ಅಸ್ಕಿಹಾಳ್ ಗ್ರಾಮದಿಂದ ರಾಂಪೂರ ರಸ್ತೆ ಅವರಿಗೆ ಸಿಸಿ ರಸ್ತೆ, ಸಿಸಿ ಚರಂಡಿ ಹಾಗೂ ಕವರಿಂಗ್ ಸ್ಲಾಬ್ ನಿರ್ಮಾಣಕ್ಕೆ ಒಟ್ಟು 7.40 ಕೋಟಿ مة ಕ್ರಿಯಾ ಯೋಜನೆ ಮಾಡಲಾಗಿದೆ.

ನಗರ ವ್ಯಾಪ್ತಿಯ ವಾರ್ಡ್ ಸಂಖ್ಯೆ 34, 06 ಮತ್ತು 17ರ ಎಸ್ ಟಿ ಕಾಲೋನಿಗಳಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಮಾರ್ಗ ಮತ್ತು ಸಿಸಿ ಚರಂಡಿ,ಡಕ್ಟ್ ಲೈನ್ ಕವರಿಂಗ್ ಸ್ಪ್ಯಾಬ್ ಕಾಮಗಾರಿಗೆ 5.46 ಕೋಟಿ ಕ್ರಿಯಾಯೋಜನೆ ಮಾಡಲಾಗಿದೆ.

ರಾಂಪುರ್ ಭಾಗದಲ್ಲಿ ಕಾಮಗಾರಿ ನಡೆಯುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. 34,06 ಮತ್ತು 17 ವಾರ್ಡ್ ಗಳಲ್ಲಿ ಈಗಾಗಲೇ ಕೆಲ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎನ್ನುವುದು ಆಕ್ಷೇಪಣೆಗೆ ದಾರಿ ಮಾಡಿದೆ.

ನಗರದ ರಾಜ್ಯ ಹೆದ್ದಾರಿ 20 ರಲ್ಲಿ ಚಂದ್ರಮೌಳೇಶ್ವರ ವೃತ್ತದಿಂದ ಅಸ್ಕಿಹಾಳವರೆಗೆ ಬೀಟಿ ರಸ್ತೆ ಕಾಮಗಾರಿ ಒಳಗೊಂಡಂತೆ ಟಕ್ ಲೈನ್ ಪಾದಾಚಾರಿ ಮಾರ್ಗ ಮತ್ತು ಸಿಸಿ ಚರಂಡಿ ನಿರ್ಮಿಸುವ ಕಾಮಗಾರಿಗೆ 15 ಕೋಟಿ ನಗದಿಗೊಳಿಸಲಾಗಿದೆ.

ಚಂದ್ರಮೌಳೇಶ್ವರದಿಂದ ಅಸ್ಕಿಹಾಳ್ ವರೆಗೆ ಇತ್ತೀಚಿಗಷ್ಟೇ ಕಾಮಗಾರಿ ಕೈಗೊಳ್ಳಲಾಗಿರುವುದು ತಿಳಿದ ಸಂಗತಿಯಾಗಿದೆ. ಈ ಕ್ರಿಯಾ ಯೋಜನೆಯಲ್ಲಿರುವ ಎಲ್ಲಾ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಪುನಃ ಈ ಕಾಮಗಾರಿಗೆ 15 ಕೋಟಿ ಅಗತ್ಯವಿತ್ತೆ.

ಕ್ರಿಯಾ ಯೋಜನೆ ಸಂಖ್ಯೆ 18ರಲ್ಲಿ ದಾಖಲಿಸಿದ ರಸ್ತೆಗಳಲ್ಲಿ ಎಲ್.ವಿ.ಡಿ ಕಾಲೇಜ್ ರಸ್ತೆ, ಮಾಣಿ ಪ್ರಭು ದೇವಸ್ಥಾನ ಮತ್ತು ವಾಸವಿ ನಗರ ಸುತ್ತಮುತ್ತದ ಪ್ರದೇಶದಲ್ಲಿ ಅನೇಕ ರಸ್ತೆ ಕಾಮಗಾರಿಗಳು ಇತ್ತೀಚಿಗೆ ನಗರೋತ್ತಾನ 2022 ರಡಿ ಕೈ ಗೊಳ್ಳಲಾಗಿದೆ. ಮತ್ತೆ ಈ ಕ್ರಿಯೆ ಯೋಜನೆಗಲ್ಲಿ ಇದೇ ಕಾಮಗಾರಿಗಳು ಸೇರ್ಪಡೆ ಉದ್ದೇಶವೇನು?.

ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಅಡಿ ಬಿಡುಗಡೆಗೊಂಡ 185 ಕೋಟಿ ಮೊತ್ತದ ಕ್ರಿಯಾ ಯೋಜನೆ, ಅನೇಕ ಲೋಪಗಳೊಂದಿಗೆ ಬಾರಿ ಅನುಮಾನಕ್ಕೆ ಎಡೆ ಮಾಡುವ ರೀತಿಯಲ್ಲಿ ರೂಪಿಸಲಾಗಿದ್ದು, ಇದನ್ನು ಪರಿಷ್ಕರಿಸುವಂತೆ ಈಗಾಗಲೇ ಶಾಸಕರಾದ Dr. S Shivaraj Patil ಜೀ ಅವರು ಒತ್ತಾಯ ಮಾಡಿದ್ದು, ಈ ಒತ್ತಾಯಕ್ಕೆ ಸ್ಪಂದನೆ ದೊರೆಯುವುದೇ? ಕಾದು ನೋಡಬೇಕಾಗಿದೆ.

ಹೆಚ್ಚಿನ ಸುದ್ದಿ