ಶಹಾಪುರ : ಯಾದಗಿರಿ ಜಿಲ್ಲೆಯ ಶಹಾಪುರ ನಗರದ ತಹಸೀಲ್ದಾರ ಕಾರ್ಯಾಲಯದ ಮುಂಭಾಗದಲ್ಲಿ ಇಂದು ಕೋಲಿ,ಕಬ್ಬಲಿಗ ಸಮಾಜ ಶಹಾಪುರ ತಾಲೂಕು ಅಧ್ಯಕ್ಷ ರಾಯಪ್ಪ ಸಾಲಿಮನಿ ಅವರ ನೇತೃತ್ವದಲ್ಲಿ-08-2025 ಬುಧವಾರದಂದು ನಾಯಕ ಸಮಾಜದ ಮುಖಂಡರು ಪ್ರತಿಭಟನೆ ಕಾರ್ಯಕ್ರಮದಲ್ಲಿ ನಾಯಕ ಸಮಾಜದ ಕೆಲ ಕಿಡಿಗೇಡಿಗಳು ಕೋಲಿ,ಕಬ್ಬಲಿಗ ಸಮಾಜದ ಕುಲ ಗುರು ಬಸವಣ್ಣನವರ ಸಮಕಾಲಿನವರಾದ ಶ್ರೀ ಗುರು ನಿಜಶರಣ ಅಂಬಿಗರ ಚೌಡಯ್ಯನವರ ಬಗ್ಗೆ ನಾಲಿಗೆ ಹರಿ ಬಿಟ್ಟಿದ್ದಲ್ಲದೆ ಕೋಲಿ ಕಬ್ಬಲಿಗ, & ತಳವಾರ ಸಮಾಜದವರಿಗೆ ಬಹಿರಂಗವಾಗಿ ಧ್ವನಿವರ್ಧಕ ಮೂಲಕ ಜೀವ ಬೆದರಿಕೆ ಹಾಕಿರುವ ನಾಯಕ ಸಮಾಜದ ಕೆಲ ಕಿಡಿಗೇಡಿಗಳ ವಿರುದ್ದ ಜಾತಿನಿಂದನೆ ಆರೋಪದಡಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಬೃಹತ್ ಪ್ರತಿಭಟನೆ ಮಾಡಿ ತಹಸೀಲ್ದಾರ ಅವರಿಗೆ ಮನವಿಪತ್ರವನ್ನು ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಕೋಲಿ,ಕಬ್ಬಲಿಗ ಸಮಾಜದ ತಾಲೂಕು ಗೌರವ ಅಧ್ಯಕ್ಷ ಅಯ್ಯಣ್ಣ ಕನ್ಯಾಕೋಳೂರು ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾಧ್ಯಮಗಳ ಹೇಳಿಕೆ ನೀಡುವ ಮೂಲಕ ನಮ್ಮ ಕುಲ ಗುರುಗಳ ಬಗ್ಗೆ ನಾಲಿಗೆ ಹರಿಬಿಟ್ಟಂತ ನಾಯಕ ಸಮಾಜದ ಕೆಲ ಕಿಡಿಗೇಡಿಗಳ ವಿರುದ್ದ ಜಾತಿ ನಿಂದನೆ ,ಜೀವ ಬೆದರಿಕೆಯಡಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಕೋಲಿ,ಕಬ್ಬಲಿಗ,ಸಮಾಜದ ತಾಲೂಕು ಅಧ್ಯಕ್ಷ ರಾಯಪ್ಪ ಸಾಲಿಮನಿ, ಕಾರ್ಯದರ್ಶಿ ಯಲ್ಲಪ್ಪ ನಾಯಿಕೋಡಿ, ಯುವ ಘಟಕ ಅಧ್ಯಕ್ಷ ಬಸು ರತ್ತಾಳ (ಚೆಂಡು) ಮುಖಂಡರಾದ ಭೀಮಣ್ಣ ಶಖಾಪೂರ್,ಹಾಗೂ ಕೋಲಿ,ಕಬ್ಬಲಿಗ ತಳವಾರ ಸಮಾಜದ ಹಲವಾರು ಹಿರಿಯ ಮುಖಂಡರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಮೌನೇಶ ಆರ್ ಭೋಯಿ
