Monday, February 9, 2026
HomeUncategorizedಕಕ್ಕೇರಾ ಪಟ್ಟಣದ ಹಲವೆಡೆ 69 ನೇ ಕನ್ನಡ ರಾಜ್ಯೋತ್ಸವ :ಪುರಸಭೆ ಅಧ್ಯಕ್ಷ ಸಣ್ಣ ಹೈಯ್ಯಾಳಪ್ಪ ಧ್ವಜಾರೋಹಣ.

ಕಕ್ಕೇರಾ ಪಟ್ಟಣದ ಹಲವೆಡೆ 69 ನೇ ಕನ್ನಡ ರಾಜ್ಯೋತ್ಸವ :ಪುರಸಭೆ ಅಧ್ಯಕ್ಷ ಸಣ್ಣ ಹೈಯ್ಯಾಳಪ್ಪ ಧ್ವಜಾರೋಹಣ.

ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪದವಿಪೂರ್ವ ಕಾಲೇಜು,ಪ್ರೌಢ ಶಾಲೆ, ಡಾ//ಬಾಬು ಜಗಜೀವನ್ ರಾಮ್ ವೃತ್ತ,ಡಾ/ಬಿ.ಆರ್.ಅಂಬೇಡ್ಕರ್ ವೃತ್ತ ಹಾಗೂ ಪುರಸಭೆ ಕಾರ್ಯಾಲಯದಲ್ಲಿ

ಇಂದು 69 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಪುರಸಭೆ ಅಧ್ಯಕ್ಷ ಸಣ್ಣ ಹೈಯ್ಯಾಳಪ್ಪ ಪೂಜಾರಿ ಧ್ವಜಾರೋಹಣ ನೇರವೇರಿಸಿದರು.
ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರವನ್ನು ಉದ್ದೇಶಿಸಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗವಿಸಿದ್ಧಪ್ಪ ವಗರಿ ಅವರು ಮಾತನಾಡುತ್ತಾ.

ಇಂದು ಕರುನಾಡ ಕನ್ನಡಿಗರ ಹೆಮ್ಮೆಯ ದಿನ, ಹಲವಾರು ಮಹನೀಯರ ಹೋರಾಟ, ತ್ಯಾಗ,ಬಲಿದಾನದಿಂದ ನಮ್ಮ ಚೆಲುವ ಕನ್ನಡ ನಾಡು ಉದಯವಾದ ಕನ್ನಡ ರಾಜ್ಯೋತ್ಸವ ಹಬ್ಬ ಈ ಶುಭ ದಿನದಂದು ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವ ಶುಭಾಷಯಗಳನ್ನು ಕೋರುತ್ತಾ.
ಕರ್ನಾಟಕ ಏಕೀಕರಣಕ್ಕಾಗಿ ನಡೆ ಚಳುವಳಿಯ ಕಾವು ಹೆಚ್ಚಾದಾಗ 1956 ನವೆಂಬರ್ 1 ರಂದು ಮದ್ರಾಸ್, ಮುಂಬೈ,ಹೈದ್ರಾಬಾದ್, ಪ್ರಾಂತ್ಯದಲ್ಲಿರುವ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ ಅಖಂಡ ಮೈಸೂರು ರಾಜ್ಯ ಉದಯವಾಯಿತು.
ಉತ್ತರ ಕರ್ನಾಟಕ ಭಾಗದ ಜನತೆಯ ಮಾನ್ಯತೆಗಾಗಿ ರಾಜ್ಯದ ಹೆಸರನ್ನು ಮೈಸೂರು ಬದಲಾಗಿ ಕರ್ನಾಟಕ ಎಂದು ಮರು ನಾಮಕರಣ ಮಾಡಬೇಕು ಎಂದು 1972 ಜುಲೈ ತಿಂಗಳಿನಲ್ಲಿ ಚಳುವಳಿ ನಡೆದ ಈ ದೀರ್ಘಾವಧಿಯ ಕಾಲದ ಚರ್ಚೆಗಳ ನಂತರ 1973 ನವೆಂಬರ್ 1 ರಂದು ರಾಜ್ಯ ವಿಧಾನಸಭೆಯಲ್ಲಿ ಇದಕ್ಕೆ ಸರ್ವಾನುಮತದಿಂದ ಅನುಮತಿ ಪಡೆದು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ಮರು ನಾಮಕರಣ ಮಾಡಲಾಯಿತು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಾನಪ್ಪ ಗೋನಾಲ್,ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲ್ಲಾಪುರ, ಪುರಸಭೆ ಸದಸ್ಯ ಪರಮಣ್ಣ ಕಮತಗಿ,ಪ್ರಾಂಶುಪಾಲ ಭೀಮಪ್ಪ ಚಂದಪ್ಪ ಭೋಸ್ಗಿ,ಪ್ರೌಢ ಶಾಲಾ ಪ್ರಧಾನಗುರು ಬಸಯ್ಯಸ್ವಾಮಿ,ವ್ಯವಸಾಯ ಸಹಕಾರ ಸಂಘ ಅಧ್ಯಕ್ಷ ಚಿದಾನಂದ ಕಮತಗಿ,ಹಣಮಂತ್ರಾಯ ಬಳಿಚಕ್ರ,ನಂದಣ್ಣ ವಾರಿ,ಸಂಗಣ್ಣ ಸುಬೇದಾರ್, ಅಂಬೇಡ್ಕರ್ ಸ್ವಾಭಿಮಾನ ಸೆಸನೆ ಸುರಪುರ ತಾಲೂಕು ಅಧ್ಯಕ್ಷ ಬಸವರಾಜ ಹೊಸಮನಿ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.ಕಕ್ಕೇರಾ ಪಟ್ಟಣದ ಹಲವೆಡೆ 69 ನೇ ಕನ್ನಡ ರಾಜ್ಯೋತ್ಸವ :ಪುರಸಭೆ ಅಧ್ಯಕ್ಷ ಸಣ್ಣ ಹೈಯ್ಯಾಳಪ್ಪ ಧ್ವಜಾರೋಹಣ.

ವರದಿ: ಮೌನೇಶ ಆರ್ ಭೋಯಿ

ಹೆಚ್ಚಿನ ಸುದ್ದಿ