ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ಕಿತ್ತೂರಿನಲ್ಲಿ ಸೋಮವಾರ ಪೇಟೆ ಹೋಗುವ ಕೆನರಾ ಬ್ಯಾಂಕ್ ಮುಂದೆ ಇರುವ ಬಸ್ ನಿಲ್ದಾಣವನ್ನು ಅತಿಕ್ರಮಣ ಮಾಡಿ ಅಂಗಡಿ ಮುಂಗಟ್ಟುಗಳು ಹಾಕಿಕೊಂಡು ವ್ಯಾಪಾರ ವಹಿವಾಟು ನಡೆಸುತಿದ್ದಾರೆ.



ಬಸ್ ನಿಲ್ದಾಣ ಪ್ರಯಾಣಿಕರಿಗೆ ಮೀಸಲಿಟ್ಟ ಬಸ್ ನಿಲ್ದಾಣ ಮರಳಿ ಬಸ್ ನಿಲ್ದಾಣ ಮಾಡಬೇಕು ಎಂದು ಕಿತ್ತೂರು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಪ್ರವೀಣ್ ಸರ್ದಾರ್ ರುದ್ರಪ್ಪ ಸರದಾರ ಬಸವರಾಜ್ ಸರದಾರ ಇನ್ನೂ ಅನೇಕ ಕಬ್ಬು ಬೆಳೆಗಾರರ ಸಂಘದ ಯುವಕರು, ಕರ್ನಾಟಕದ ಯುವ ಸಂಘಟನೆಯವರು ನೇತೃತ್ವದಲ್ಲಿ ಹೋರಾಟ ಮಾಡಿದರು ಹಾಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪಟ್ಟಣ ಪಂಚಾಯತಿ ಆಡಳಿತ ಮಂಡಳಿಗೆ ತಿಳಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು….
ಪಟ್ಟಣದ ಪಂಚಾಯಿತಿಯವರಿಗೆ ತೆರವುಗೊಳಿಸಲು 8 ದಿನದಲ್ಲಿ ತೆರವುಗೊಳಿಸದಿದ್ದರೆ ಉಗ್ರ ಹೋರಾಟ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಪ್ರವೀಣ ಸರದಾರ ಎಚ್ಚರಿಕೆ.! ನೀಡಿದರು
ಕರ್ನಾಟಕ ರಕ್ಷಣಾ ಯುವ ವೇದಿಕೆ ಅಧ್ಯಕ್ಷ ಕಿರಣ ವಾಳದ ಮತ್ತು ಮಹೇಶ ಪೂಜಾರ ಉಪಾಧ್ಯಕ್ಷರು. ಬಸವರಾಜ ಸಂಪಗಾವಿ , ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಹೋರಾಟದಲ್ಲಿ ಉಪಸ್ಥಿತರಿದ್ದರು.
ಸಂಪಾದಕರು: ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)
