Monday, February 9, 2026
Homeಜಿಲ್ಲಾ ಸುದ್ದಿಗಳುಉಚಿತ ಹೊಲಿಗೆ ತರಬೇತಿಯ ಸಮಾರೋಪ ಸಮಾರಂಭ..

ಉಚಿತ ಹೊಲಿಗೆ ತರಬೇತಿಯ ಸಮಾರೋಪ ಸಮಾರಂಭ..

ಹುಬ್ಬಳ್ಳಿ: ಕಾರ್ಯಕ್ರಮ-ಕಾರ್ಪೋರೆಟರ್‌ ಶ್ರೀ ಶಿವು ಮೆಣಸಿನಕಾಯಿ ರವರಿಂದ ಉದ್ಘಾಟನೆ ಹಾಗೂ ಅಭಿನಂದನಾ ಪತ್ರ ವಿತರಣೆ ……
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌(ರಿ)  ಹುಬ್ಬಳ್ಳಿ ತಾಲೂಕು ವತಿಯಿಂದ ದಿನಾಂಕ:31.01.2026 ರಂದು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಮೂರು ತಿಂಗಳ ಉಚಿತ ಹೊಲಿಗೆ ತರಬೇತಿಯ ಸಮಾರೋಪ ಸಮಾರಂಭವನ್ನು ಹಸನ್ಮುಖಿ ಜಾನವಿಕಾಸ ಕೇಂದ್ರದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಸುಕನ್ಯ ವಹಿಸಿಕೊಂಡಿದ್ದರು.

ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ
ಶಿವು ಮೆಣಸಿನಕಾಯಿ ಕಾರ್ಪೊರೇಟರ್ ಧರ್ಮಸ್ಥಳದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮಹಿಳಾ ಸಬಲೀಕರಣದ ಬಗ್ಗೆ ಉತ್ತಮವಾದ ಕಾರ್ಯಗಳನ್ನು ಡಾಕ್ಟರ್ ವೀರೇಂದ್ರ ಹೆಗಡೆಯವರು ಮಾಡುತ್ತಿದ್ದಾರೆ ಪ್ರತಿಯೊಂದು ಕಾರ್ಯಕ್ರಮದ ಸದುಪಯೋಗವನ್ನು ಉತ್ತಮವಾಗಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು ತರಬೇತಿಯನ್ನು ಪಡೆದವರಿಗೆ ಅಭಿನಂದನಾ ಪತ್ರವನ್ನು ವಿತರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಂಕರಪ್ಪ ಟೋಪಾಗಿ ಕಲ್ಲಪ್ಪ ಗುಡ್ಡದ ಓಣಿಯ ಹಿರಿಯರು ಜ್ಞಾನವಿಕಾಸ ಸಮನ್ವಯ ಅಧಿಕಾರಿಯಾದ ರೇಣುಕಾ ನಾಯ್ಕ ತರಬೇತಿ ಶಿಕ್ಷಕಿಯಾದ ಕುಮಾರಿ ಪೂಜಾ ಕವಿತಾ ಇತರರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ