Tuesday, February 10, 2026
HomeUncategorizedಈಚನಾಳ ಪಿ. ಡಿ. ಓ. ಖಾಜಾಬೇಗಂ ಫೈಲ್ ಮೂವ್ ಮಾಡಲು ಲಂಚ ಬೇಕೆಂತೆ.

ಈಚನಾಳ ಪಿ. ಡಿ. ಓ. ಖಾಜಾಬೇಗಂ ಫೈಲ್ ಮೂವ್ ಮಾಡಲು ಲಂಚ ಬೇಕೆಂತೆ.

ಲಿಂಗಸಗೂರು:ತಾಲೂಕಿನ ಈಚನಾಳಗ್ರಾಮಪಂಚಾಯ್ತಿಯಲ್ಲಿ ಕೆಲಸವಾಗಬೇಕಾದರೆ ಇಲ್ಲಿಯ ಅಭಿವೃದ್ಧಿಯ ಅಧಿಕಾರಿ ಖಾಜಾಬೇಗಂ ಗೆಲಂಚಕೊಡಬೇಕಂತೆ ಲಂಚಕೊಡದಿದರೆ ಅವರ ಫೈಲ್ ಮೂವ್ ಆಗುವುದಿಲ್ಲವೆಂದು ಹೇಳಲಾಗುತ್ತಿದ್ದು ಅಂತಹ ಆಡಿಯೋ ಒಂದು ವೈರಲ್ ಆಗಿದ್ದು ಅದು ಕಲ್ಯಾಣ ಕರ್ನಾಟಕ ಪತ್ರಿಕೆಗೆ ದೊರಕಿದೆ ಈಚನಾಳ ಗ್ರಾಮದ ರೈತ ಲಿಂಗಪ್ಪ ಪೂಜಾರ ಎನ್ನುವವರು ದನದ ಶೆಡ್ ನಿರ್ಮಿಸಲು ನರೇಗಾದಲ್ಲಿ ಫಲಾನುಭವಿಯಾಗಿ ದ್ದಾರೆ ಇವರು ಸುಮಾರು ಹಣಖರ್ಚುಮಾಡಿ ದನದ ಶೆಡ್ ನಿರ್ಮಾಣ ಮಾಡಿದ್ದು ನರೇಗಾದಿಂದ ಬರಬೇಕಾದ ಹಣದವನ್ನು ನೀಡಲು ಈಗನಾಳ ಗ್ರಾಮಪಂಚಾಯ್ತಿಯ ಅಭಿವೃದ್ದಿ ಅಧಿಕಾರಿ ಖಾಜಾಬೇಗಂ ಎನ್ನುವವರು ಫಲಾನುಭವಿ ಲಿಂಗಪ್ಪ ಪೂಜಾರಿಗೆ ಕರೆಮಾಡಿ ನೀ ಗ್ರಾಮಪಂಚಾಯ್ತಿಗೆ ಬನ್ನಿ ಎನ್ನುತ್ತಾರೆ ಏನು ಕೆಲಸ ಮೆಡಂ ಎಂದರೆ ಬೇಗನೇ ಬನ್ನಿ ಕೆಲಸ ಇದೆ ಎನ್ನುತ್ತಾರೆ ನಂತರದಲ್ಲಿ ಫಲಾನುಭವಿ ಗ್ರಾಮಪಂಚಾಯ್ತಿಗೆ ತೆರಳಿದಾಗ ನಿಮ್ಮ ಫೈಲ್ ಎಲ್ಲಾ ರೆಡಿಯಾಗಿದೆ ಅದನ್ನು ಮೂವ್ ಮಾಡಲು ಐದುಸಾವಿರ ಹಣಕೊಡು ಎಂದು ಓಪನ್ ಆಗಿಯೆ ಕೇಳುತ್ತಾರೆ ನಮಗೆ ಲಂಚದರೂಪದಲ್ಲಿ ಹಣ ಕೊಡುತ್ತಿರುವುದು ನೀ ಒಬ್ಬನೆ ಅಲ್ಲ ಯಾರು ಯಾರು ಫಲಾಭವಿ ಇದ್ದಾರೆಯೊ ಅವರೆಲ್ಲರನ್ನು ಕರೆಸಿ ಎಲ್ಲರಂತೆ ನೀನು ಹಣಪಡೆಯುತಿದ್ದೇನೆ ನನಗೆಐದುಸಾವಿರ ಕೊಡಬೇಕೆಂದು ಬೇಡಿಕೆ ಇಡುತ್ತಾಳೆ ಸದ್ಯದ ಫೈಲ್ ನಲ್ಲಿ ಹಣ ಕಡಿಮೆ ಬಂದಿದೆ ಮೇಡಂ ಇನ್ನು ಹೆಚ್ಚಿಗೆ ಬರಬೇಕಾಗಿತ್ತು ಎಂದು ಫಲಾನುಭವಿ ಕೇಳಿದರೆ ನಾನಿದ್ದೇನೆ ಹೆಚ್ಚಿಗೆ ಮಾಡಿಕೊಡುತ್ತೇನೆ ಎನ್ನುವ ಸದರಿ ಭರವಸೆಯನ್ನು ನೀಡುತ್ತಾಳೆ ಗ್ರಾಮಪಂಚಾಯ್ತಿಯಲ್ಲಿ ನರೇಗಾ ಯೋಜನೆಯಲ್ಲಿ ಕೆಲಸ ಮಾಡಲಾರದವರ ಖಾತೆಗಳಿಗೂ ಹಣ ಹಾಕಲಾಗಿದೆ ಬೇರೆ ಊರಿನಲ್ಲಿರುವವರ ಖಾತೆಗಳಿಗೂ ಹಣ ಹಾಕಲಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತವೆಇಲ್ಲಿ ತಾನೆ ನೇರವಾಗಿ ಲಂಚದ ಹಣ ತೆಗೆದುಕೊಳ್ಳುವುದಿಲ್ಲವಂತೆ ಅಭಿವೃದ್ಧಿ ಅಧಿಕಾರಿ ಮೆಡಂ ಹೇಳಿದ ಮೇಲೆ ಫಲಾನುಭವಿ ಸುರೇಶ ಎನ್ನುವ ಕಂಪ್ಯೂಟರ್ ಆಪರೇಟರನ್ನು ಭೇಟಿಯಾಗಬೇಕಂತೆ ಅಲ್ಲಿಗೆ ಅವರ ಫೈಲ್ ಮೂವ್ ಆದಂತೆ ಕ್ರಮಯಾವಾಗ? ಈಚನಾಳ ಗ್ರಾಮಪಂಚಾಯ್ತಿ ಪಿಡಿಓ ಖಾಜಾಬೇಗಂ ಓಪನ್ ಆಗಿ ಫಲಾನುಭವಿಗಳಿಗೆ ಲಂಚಕ್ಕೆ ಬೇಡಿಕೆ ಇಟ್ಟರು ಸಹಿತಮೇಲೆ ಕ್ರಮಯಾಕೆ ಜರುಗಿಸಿಲ್ಲ ಎನ್ನುವುದ ಸಾರ್ವಜನಿಕರ ಪ್ರಶ್ನೆಯಾಗಿದೆ ಇನು ಮುಂದಾದರು ಸಂಬಂಧಿಸಿದ ಅಧಿಕಾರಿಗಳು ಕ್ರಮಜರುಗಿಸಬಹುದೆ ಕಾದುನೋಡೋ ಬೇಕಿದೆ.

ಹೆಚ್ಚಿನ ಸುದ್ದಿ