Tuesday, February 10, 2026
Homeಜಿಲ್ಲಾ ಸುದ್ದಿಗಳುಅಫಜಲಪುರ ಮತಕ್ಷೇತ್ರ ಜೆಡಿಎಸ ಪಕ್ಷದ ವಿವಿಧ ಹುದ್ದೆಗಳ ಪದಾಧಿಕಾರಿಗಳ ಆಯ್ಕೆ.

ಅಫಜಲಪುರ ಮತಕ್ಷೇತ್ರ ಜೆಡಿಎಸ ಪಕ್ಷದ ವಿವಿಧ ಹುದ್ದೆಗಳ ಪದಾಧಿಕಾರಿಗಳ ಆಯ್ಕೆ.

ಕಲಬುರ್ಗಿ ಜ 8 :: ಕಲಬುರಗಿ ನಗರದ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದ ಕಚೇರಿಯಲ್ಲಿ ಇಂದು ಅಫಜಲಪುರ ಮತಕ್ಷೇತ್ರ ಪಕ್ಷದ ವಿವಿಧ ಹುದ್ದೆಗಳ ಪದಾಧಿಕಾರಿಗಳ ಆಯ್ಕೆ ನಡೆಯಿತು
ಅಫಜಲಪುರ ತಾಲ್ಲೂಕ ಜೆಡಿಎಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಸಿಂಗೆ ಯವರನ್ನು ಕಲಬುರ್ಗಿ ಜಿಲ್ಲಾ ಉಪಾಧ್ಯಕ್ಷರಾಗಿ ಶಂಕರಗೌಡ ಪಾಟೀಲ ಭೋಸಗಾ ಅವರನ್ನು ತಾಲ್ಲೂಕು ಯುವ ಘಟಕದ ಅಧ್ಯಕ್ಷರಾಗಿ ಸಿದ್ದು ಪಾಟೀಲ ಅವರನ್ನು ಮತ್ತು ತಾಲ್ಲೂಕು ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿ ಭೀರಪ್ಪ ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ ಪಕ್ಷದ ಅಧ್ಯಕ್ಷರಾದ ಬಾಲರಾಜ ಗುತ್ತೇದಾರ ಅವರುಸೇರಿದಂತೆ ಬಸವರಾಜ ಬಿರಬಟ್ಟಿ, ಶಾಮರಾವ ಸೂರನ, ಶರಣಗೌಡ ಪಾಟೀಲ, ರಾಜು ಉಕ್ಕಲಿ, ಅಮೋಲ ಮೊರೆ, ಶ್ರೀಕಾಂತ ದಿವಾಣಜಿ, ಅಮರಸಿಂಗ ರಜಪೂತ, ಮರೇಪ್ಪ ಜಮಾದಾರ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ