Tuesday, August 11, 2026
Homeಆರೋಗ್ಯಅಥಣಿಯಲ್ಲಿ ಅನ್ನಪೂರ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಅಂಜುಮನ್-ಎ-ಇಸ್ಲಾಂ ಕಮಿಟಿ, ಇವರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ...

ಅಥಣಿಯಲ್ಲಿ ಅನ್ನಪೂರ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಅಂಜುಮನ್-ಎ-ಇಸ್ಲಾಂ ಕಮಿಟಿ, ಇವರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು..

ನೂರಾರು ಜನರಿಗೆ ಸದುಪಯೋಗವನ್ನು ಪಡೆದರು

ಅಥಣಿ, ಜೂನ್ 21: ಪಟ್ಟಣದ ಡಾ. ಎ. ಎ. ಪಾಂಗಿ ಅವರ ಅನ್ನಪೂರ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಅಂಜುಮನ್-ಎ-ಇಸ್ಲಾಂ ಕಮಿಟಿ, ಅಥಣಿ ಇವರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅನ್ನಪೂರ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಎ. ಎ. ಪಾಂಗಿ ಅವರು, “ಆರೋಗ್ಯವೇ ಭಾಗ್ಯ. ಬಡ ಮತ್ತು ನಿರ್ಗತಿಕ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ರೋಗಲಕ್ಷಣಗಳನ್ನು ಆರಂಭದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಭವಿಷ್ಯದಲ್ಲಿ ಎದುರಾಗುವ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು. ನನ್ನ ಕೊನೆಯ ಉಸಿರು ಇರುವವರೆಗೂ ನಿಸ್ವಾರ್ಥ ಸೇವೆಯ ಮೂಲಕ ಜನರ ಆರೋಗ್ಯ ರಕ್ಷಣೆಗೆ ಶ್ರಮಿಸುತ್ತೇನೆ” ಎಂದು ಹೇಳಿದರು.

ಅಂಜುಮನ್-ಎ-ಇಸ್ಲಾಂ ಕಮಿಟಿ ತಾಲೂಕು ಅಧ್ಯಕ್ಷ ಸಯ್ಯದ್ ಅಮೀನ್ ಗದ್ಯಾಳ ಮಾತನಾಡಿ, “ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೇ ಪ್ರತಿಯೊಬ್ಬರೂ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯಕ. ಅನ್ನಪೂರ್ಣ ಆಸ್ಪತ್ರೆಯ ಸಮಾಜಮುಖಿ ಸೇವಾ ಮನೋಭಾವ ಶ್ಲಾಘನೀಯವಾಗಿದ್ದು, ಇತರರಿಗೆ ಮಾದರಿಯಾಗಿದೆ” ಎಂದು ಅಭಿಪ್ರಾಯಪಟ್ಟರು.

ಮುಸ್ಲಿಂ ಸಮಾಜದ ಮುಖಂಡ ಇನೂಸ್ ಮುಲ್ಲಾ ಮಾತನಾಡಿ, “ಅಂಜುಮನ್-ಎ-ಇಸ್ಲಾಂ ಕಮಿಟಿಯು ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಇಂತಹ ಆರೋಗ್ಯ ಶಿಬಿರಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ವರದಾನವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ತಿಳಿಸಿದರು.

ಮುಸ್ಲಿಂ ಧರ್ಮಗುರು ಮೌಲಾನಾ ಹಬೀಬುಲ್ಲಾ ಕಾಶ್ಮಿ ಅವರು ಆಶೀರ್ವಚನ ನೀಡಿ, “ಮಾನವ ಸೇವೆಯೇ ದೇವರ ಸೇವೆ. ಜನಸಾಮಾನ್ಯರ ಆರೋಗ್ಯದ ಕಾಳಜಿ ವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಂತಹ ಜನೋಪಯೋಗಿ ಕಾರ್ಯಕ್ರಮಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ” ಎಂದು ಹೇಳಿದರು.

ಶಿಬಿರದಲ್ಲಿ ನೂರಾರು ಜನರು ಭಾಗವಹಿಸಿ ವಿವಿಧ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಂಡು ತಜ್ಞ ವೈದ್ಯರಿಂದ ಸಲಹೆ ಹಾಗೂ ಮಾರ್ಗದರ್ಶನ ಪಡೆದರು.

ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ. ಸಂತೋಷ ಅಕ್ಕಲಕೋಟ, ಡಾ. ಅನಿಲ ಪಾಟಿಲ, ಡಾ. ಕವಿತಾ ಕಾಂಬಳೆ,ಡಾ. ರವಿ ಪಾಂಗಿ,ಡಾ. ಶಶಿಕಲಾ. ಆರ್. ಪಾಂಗಿ ಸೇರಿದಂತೆ ಹಲವರು ವೈದ್ಯರ ತಂಡ ಸೇವೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮೌಲಾನಾ ಗುಲಾಮ್ ಮುಸ್ತಫಾ , ಮೌಲಾನಾ ಶೋಹೆಬ ಭಗವಾನ್ ,ಅಸ್ಲಂ ನಾಲಬಂದ, ಐ.ಜಿ.ಬಿರಾದರ್, ಮುಸ್ತಾಕ ಮುಲ್ಲಾ, ಮುಸ್ತಾಕ ಪಟೇಲ, ಬಾಬು ಖೇಮಲಾಪುರ, ನಿಸಾರ್ ಶೇಖ್, ನಾವಿದ ಖಾಜಿ, ಸೋಹೈಲ್ ಖಾಜಿ ಸೇರಿದಂತೆ ಅಂಜುಮನ ಏ ಇಸ್ಲಾಂ ಕಮಿಟಿ ತಾಲೂಕು ಸದಸ್ಯರುಗಳಾದ ಜುಬೇರ್ ನಾಲಬಂದ, ಇಲಿಯಾಸ್ ಹಿಪ್ಪರಗಿ, ಅಬಿದ್ ಮಾಸ್ಟರ್, ಅಬ್ದುಲ್ ಅಜೀಜ್ ಮುಲ್ಲಾ, ಅಮಾನುಲ್ಲಾ ಮುಲ್ಲಾ, ಖಲೀಲ್ ಭಗವಾನ್, ಮಕ್ಸೂದ್ ಮುಲ್ಲಾ, ರಿಯಾಜ್ ಸನದಿ, ಸಲ್ಮಾನ್ ಮೌಲ್ವಿ, ಸಯ್ಯದ್ ಗಡ್ಡೆಕರ, ವಸೀಮ್ ಖೇಮಲಾಪುರ, ಇಮ್ರಾನ್ ಪಟಾಯತ್, ಅಬೂಬಕರ್ ಕೊಕಟನೂರ, ಸಮೀಉಲ್ಲಾ ಮೊಮಿನ್, ರಾಜು ಹಿಪ್ಪರಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ