ರಾಯಚೂರು : ರಾಯಚೂರು ನಗರದ ಗಂಜ್ ನಗರದಲ್ಲಿ ಇಂದು ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪುರ ಹಾಗೂ ರಾಯಚೂರು ಜಿಲ್ಲಾ ಅಧ್ಯಕ್ಷ ದೇವರಾಜಗೌಡ ಇವರುಗಳ ನೇತೃತ್ವದಲ್ಲಿ ರಾಯಚೂರು ಜಿಲ್ಲಾ ಘಟಕ ವತಿಯಿಂದ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಸಮಾಜ ಸಂಘಟನೆ ಜಿಲ್ಲಾ ಪದಾಧಿಕಾರಿಗಳನ್ನು ಈ ಕೆಳಕಂಡಂತೆ ನೇಮಕ ಮಾಡಿ ಆದೇಶ ಪತ್ರವನ್ನು ನೀಡಲಾಯಿತು.
1)ಮಲ್ಲಿಕಾರ್ಜುನ ಮೆಡಿಕಲ್ – ಜಿಲ್ಲಾ ಸಂಘಟನಾ ಕಾರ್ಯದರ್ಶಿ
2)ಶಶಿಧರ್ ಹಿರೇಮಠ – ಜಿಲ್ಲಾ ಸಂಚಾಲಕ
3) ಮಲ್ಲಿಕಾರ್ಜುನ ಶಿವಪುರ – ಸಂಚಾಲಕ
4)ಶರಣು ಠಾಕಿ – ಜಿಲ್ಲಾ ನಗರ ಘಟಕ ಅಧ್ಯಕ್ಷ
5)ಮಲ್ಲಿಕಾರ್ಜುನ ಹೋಟೆಲ್ – ನಗರ ಘಟಕ ಉಪಾಧ್ಯಕ್ಷ
6)ಮಂಜುನಾಥ ವಡಸೂರ್ -ನಗರ ಘಟಕ ಕಾರ್ಯದರ್ಶಿ
ಇವರುಗಳನ್ನು ನೇಮಕ ಮಾಡಿ ನೂತನ ಜಿಲ್ಲಾ ಪದಾಧಿಕಾರಿಗಳಿಗೆ ನೇಮಕಾತಿ ಆದೇಶಪತ್ರವನ್ನು ನೀಡಲಾಯಿತು.
ರಾಯಚೂರು ಜಿಲ್ಲಾ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಉದ್ದೇಶಿಸಿ ವೀರಶೈವ ಲಿಂಗಾಯತ ಸಮಾಜ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪುರ ಮಾತನಾಡುತ್ತಾ ನಮ್ಮ ವೀರಶೈವ ಲಿಂಗಾಯತ ಸಮಾಜದ ತತ್ವ ಸಿದ್ದಾಂತಗಳಿಗೆ ತಾವೆಲ್ಲರೂ ಬದ್ಧರಾಗಿರ ಬೇಕು ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ತಂದಿರುವ ಹಲವಾರು ಯೋಜನೆಗಳನ್ನು ನಮ್ಮ ಸಮಾಜದ ಕಟ್ಟಕಡೆಯ ವ್ಯಕ್ತಿಗು ಯೋಜನೆ ಮುಟ್ಟುವಂತಾಗ ಬೇಕು ಎಂದರು ರಾಜಕೀಯವಾಗಿ, ಶೈಕ್ಷಣಿಕ,ಆರ್ಥಿಕವಾಗಿ, ನಾವೆಲ್ಲರೂ ಸಧೃಡರಾಗ ಬೇಕು ಎಂದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜ ಮುಖಂಡರಾದ ಚಂದ್ರಶೇಖರ ಕೋಳಿಹಾಳ,ಬಸ್ಸು ಉಟ್ಕೋರ,ಸುನೀಲ ಕುಮಾರ್, ಭೀಮಣ್ಣ ಇತರರು ಉಪಸ್ಥಿತರಿದ್ದರು.
ವರದಿ : ಮೌನೇಶ ಆರ್ ಭೋಯಿ


