Thursday, August 13, 2026
HomeUncategorizedಅಕ್ಷಯ ತೃತೀಯ ಹಾಗೂ ಜಗದ್ಗುರು ಶ್ರೀ ಬಸವೇಶ್ವರ ರವರ ಜನ್ಮದಿನಾಚರಣೆ

ಅಕ್ಷಯ ತೃತೀಯ ಹಾಗೂ ಜಗದ್ಗುರು ಶ್ರೀ ಬಸವೇಶ್ವರ ರವರ ಜನ್ಮದಿನಾಚರಣೆ

ಅಕ್ಷಯ ತೃತೀಯ ಹಾಗೂ ಜಗದ್ಗುರು ಶ್ರೀ ಬಸವೇಶ್ವರ ರವರ ಜನ್ಮದಿನವನ್ನು ಕುನ್ನೂರ ಗ್ರಾಮ (ಶಿಗ್ಗಾಂವ ತಾಲೂಕು), ಹಾವೇರಿ ಜಿಲ್ಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಭವ್ಯ ಮೆರವಣಿಗೆ ಆಯೋಜಿಸಲಾಗಿದ್ದು, ಬಸವ ತತ್ತ್ವವನ್ನು ಸಾರುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು. ಜಾತಿ-ಬೇದವಿಲ್ಲದೆ ಎಲ್ಲಾ ಸಮುದಾಯದ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ಮೆರವಣಿಗೆಯಲ್ಲಿ ಎತ್ತುಗಳ ವಿಶೇಷ ಮೆರವಣಿಗೆ ಗಮನ ಸೆಳೆದಿದ್ದು, ಬಸವ ತತ್ವದ ಘೋಷಣೆಗಳೊಂದಿಗೆ ಡಿಜೆ ಮ್ಯೂಸಿಕ್‌ಗೆ ಯುವಜನರು ನೃತ್ಯ ಮಾಡುತ್ತಾ ಸಂಭ್ರಮದಿಂದ ಸಾಗಿದರು.

ಕುನ್ನೂರ ಗ್ರಾಮದಲ್ಲಿ ನಡೆದ ಈ ಆಚರಣೆ ಜನರಲ್ಲಿ ಏಕತೆ, ಸಹೋದರತ್ವ ಮತ್ತು ಬಸವೇಶ್ವರರ ಸಂದೇಶವನ್ನು ಮತ್ತಷ್ಟು ಗಟ್ಟಿಯಾಗಿ ಪ್ರತಿಬಿಂಬಿಸಿತು.

ಹೆಚ್ಚಿನ ಸುದ್ದಿ